ನಿವೇಶನ, ಮನೆ ಕೊಡಿಸವುದಾಗಿ ವಂಚಿಸಿದ ಸಚಿನ್ ನಾಯಕ್’ ನನ್ನ ಬಂಧಿಸುವಂತೆ ಸಿಎಂಗೆ ಮನವ

 

ಬೆಂಗಳೂರು, ಜ.21-ನಿವೇಶನ ಮತ್ತು ಮನೆ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ವಂಚಿಸಿರುವ ಉದ್ಯಮಿ ಸಚಿನ್ ನಾಯಕ್‍ನನ್ನು ಬಂಧಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಅನ್ಯಾಯಕ್ಕೊಳಗಾದ ಶರ್ಮಿಳಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿನ್ ನಾಯಕ್ ವಿದೇಶಕ್ಕೆ ಪರಾರಿಯಾದರೆ ಹಗರಣದಲ್ಲಿ ಬಲಿ ಪಶುವಾದವರಿಗೆ ಹಣ ಸಿಗುವುದಿಲ್ಲ. ಕೂಡಲೇ ಅವರನ್ನು ಬಂಸಿ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಈ ದೂರನ್ನು ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗುವುದು. ಅಲ್ಲಿ ಅವರನ್ನು ಭೇಟಿ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಮೊದಲು ನಗರ ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿದ್ದೆ. ಏನೂ ಕ್ರಮಕೈಗೊಂಡಿಲ್ಲ. ಇಂದು ಬೆಳಗ್ಗೆ ಗೃಹ ಸಚಿವರನ್ನು ಭೇಟಿ ಮಾಡಿದ್ದೆ. ಅವರು ಕಚೇರಿಯಲ್ಲಿ ಭೇಟಿ ಮಾಡಿ ದೂರು ನೀಡುವಂತೆ ತಿಳಿಸಿದ್ದಾರೆ ಎಂದು ಹೇಳಿದರು.  ಸಚಿನ್ ನಾಯಕ್ ವಿರುದ್ದ ಮಡಿವಾಳ ಠಾಣೆವೊಂದರಲ್ಲೇ ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಬಾಣಸವಾಡಿ, ಹೆಣ್ಣೂರು ಪೊಲೀಸ್ ಠಾಣೆ, ಬೆಂಗಳೂರು ಗ್ರಾಮಾಂತರ ಠಾಣೆ ಸೇರಿದಂತೆ ಹಲವಾರು ಠಾಣೆಗಳಲ್ಲಿ ಸಚಿನ್ ನಾಯಕ್ ವಿರುದ್ಧ ದೂರು ದಾಖಲಿಸಲಾಗಿದೆ.a-representatin-to-the-chief-minister-by-the-affected-to-take-action-against-cheating-real-estate-companies

ಪೂಜಾ.ಕಾಂ, ಗೃಹ ಕಲ್ಯಾಣ್, ಸೆಂಡ್ ಮೈ ಗಿಫ್ಟ್, ಡ್ರೀಮ್ಸ್ ಈ ರೀತಿ ಬೇರೆ ಬೇರೆ ಹೆಸರಿನಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ ಮನೆ ಮತ್ತು ನಿವೇಶನ ನೀಡುವುದಾಗಿ ಹೇಳಿ ವಂಚಿಸಲಾಗಿದೆ. ಇದರಲ್ಲಿ ಮನೆ ಕೆಲಸದವರು ಹೂಡಿಕೆ ಮಾಡಿದ್ದಾರೆ. ಮಂಜಿತ್‍ಕೌರ್, ನಿಶಾರಂತಹ ನಿರ್ದೇಶಕರು ಇದರಲ್ಲಿ ಭಾಗಿಯಾಗಿ  ದ್ದಾರೆ. ನಾವು ಕೆಲಸವೆಲ್ಲ ಬಿಟ್ಟು ಕಳೆದ ಒಂದು ತಿಂಗಳಿನಿಂದ ಇದಕ್ಕಾಗಿ ಅಲೆದಾಡುತ್ತಿದ್ದೇವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ನಮಗೆ ನ್ಯಾಯ ಕೊಡಿಸಲಿ ಎಂದರು.