AKRAMA SAKRAMA – A NEWS REPORT
ನಗರ ಮತ್ತು ಪಟ್ಟಣ ಪ್ರದೇಶಗಳ ಅಕ್ರಮ– ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ಕಾನೂನು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯೋಜನೆ ಜಾರಿಗೊಳಿಸಲು ಕನಿಷ್ಠ ಮೂರು ವರ್ಷ ಸಮಯ ಬೇಕಾಗುತ್ತದೆ . ಹೀಗಾಗಿ ಅಕ್ರಮ–ಸಕ್ರಮ ಅನುಷ್ಠಾನ ಗೊಳಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂಕೋರ್ಟ್ ನೀಡರುವ ಆದೇಶ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ, ಆದೇಶ ಪ್ರತಿ ನಮ್ಮ ಕೈಗೆ ಸಿಕ್ಕಿದ ಕೂಡಲೇ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಆದರೆ ಇದು ಶೀಘ್ರವೇ ಬಗೆ ಹರಿಯುವ ಕಾರ್ಯವಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಸದ್ಯ ವಿಷಯ ಸುಪ್ರಿಂ ಕೋರ್ಟ್ ನಲ್ಲಿದೆ, ಹೀಗಾಗಿ ಕನಿಷ್ಠ ಪಕ್ಷ ಮೂರು ವರ್ಷವಾದರೂ (3 YEARS) ಸಮಯ ಹಿಡಿಯುತ್ತದೆ. ಅಕ್ರಮ ಸಕ್ರಮ ವಿಚಾರವಾಗಿ ತೀರ್ಪು ನೀಡಲು ಹೈಕೋರ್ಟ್ ಈ ಹಿಂದೆ 10 ವರ್ಷಗಳ ಕಾಲ ಸಮಯ ತೆಗೆದು ಕೊಂಡಿತ್ತು ಎಂದು ಹೈಕೋರ್ಟ್ ವಕೀಲರೊಬ್ಬರು ತಿಳಿಸಿದ್ದಾರೆ.
ಆದರೆ ಯಾವುದೇ ಸಮಯದಲ್ಲಾದರೂ ಸುಪ್ರೀಂಕೋರ್ಟ್ ವಿಷಯ ಸಂಬಂಧ ಸಮಸ್ಯೆಗಳನ್ನು ಬಗೆಹರಿಸಿ ಸರ್ಕಾರ ಹಾಗೂ ಬಿಬಿಎಂಪಿಗೆ ರಿಲೀಫ್ ನೀಡಬಹುದು ಎಂದು ಹೆಸರು ಹೇಳಲು ಇಚ್ಚಿಸದ ವಕೀಲರೊಬ್ಬರು ತಿಳಿಸಿದ್ದಾರೆ.
2004 ರಲ್ಲಿ ಎಸ್ ಎಂ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಅಕ್ರಮ–ಸಕ್ರಮ ಯೋಜನೆ ಅನುಷ್ಠಾನಗೊಳಿಸಲು ಮುಂದಾದದರು. ಅಂದಿನಿಂದ ಇಂದಿನಿವರೆಗೆ, ಅಂದರೆ, ಎಚ್.ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ಅವರ ವರೆಗೊ ಹಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತಲೆ ಇವೆ.