BBMP News – A Report

ಮೂರು ಕಟ್ಟಡ ನೆಲಸಮ ಇಂದು

 
 

ಬೆಂಗಳೂರು: ಉತ್ತರಹಳ್ಳಿಯಲ್ಲಿ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಲಾದ ಮೂರು ಅಪಾರ್ಟ್‌ಮೆಂಟ್‌ ಕಟ್ಟಡಗಳನ್ನು ಗುರುವಾರ ನೆಲಸಮ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಮುನಿರಾಜು ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ನಕಲಿ ಖಾತಾ, ಕಟ್ಟಡ ನಕ್ಷೆ ಹಾಗೂ ಕಾರ್ಯ ಆರಂಭ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು ಎಂದು ದೂರಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನರಸಿಂಹಬಾಬು, ಸಹಾಯಕ ಎಂಜಿನಿಯರ್‌ಗಳಾದ ದೇವೇಗೌಡ, ಲಿಂಗರಾಜೇಗೌಡ ಅವರಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಮುನಿರಾಜು ತಿಳಿಸಿದರು.