RS.250 CRORES SCAM IN BANGALORE NORTH – ILLEGAL AND IRREGULAR LAYOUTS AND SITES WITH INVALID AND BOGUS E-KATHA IN FORM NO.9 AND 11 – ENQUIRY IS IN PROGRESS – BANGALORE NORTH

A NEWS REPORT ON ILLEGAL AND UNAUTHORISED LAYOUTS IN BANGALORE NORTH.

ILLEGAL LAYOUTS IN GREEN BELT AND FAKE DC CONVERSION ORDERS

A COMMITTEE HAS BEEN SET UP BY THE GOVERNMENT TO INVESTIGATE THE SCAM

MOST OF THE ILLEGAL SITES ARE REGISTERED AND ALL SUCH ILLEGAL AND IRREGULAR PROPERTY REGISTRATION WILL AUTOMATICALLY GETS CANCELLED.

CHECK BEFORE YOU BUY

NO CHEAP SITES. CHEAP TRICKS.

A PRESS REPORT

RS.250 CRORES OF SCAM – STAMP DUTY EVASION – DC CONVERSION FEE EVASION.

ಹಸಿರು ವಲಯದಲ್ಲಿ ಬಡಾವಣೆ ನಿರ್ಮಾಣ * ಅಕ್ರಮ ನೋಂದಣಿಗೆ ಸಹಕಾರ * ತನಿಖೆಗೆ ಸಮಿತಿ ರಚನೆ

ಬೆಂಗಳೂರು ಉತ್ತರ ತಾಲ್ಲೂಕಿನಲ್ಲೇ 250 ಕೋಟಿ ಭೂಹಗರಣ!

 

ಬೆಂಗಳೂರು: ಹಸಿರು ವಲಯದಲ್ಲಿ ಬಡಾವಣೆ ನಿರ್ಮಾಣ ಮತ್ತು  ಕಂದಾಯ ಭೂಮಿಯ  ಅಕ್ರಮ ನೋಂದಣಿ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದರಲ್ಲಿ ನೋಂದಣಿ ಶುಲ್ಕದಿಂದ ಸರ್ಕಾರಕ್ಕೆ ಸ್ವಲ್ಪ ಆದಾಯ ಬಂದರೂ, ಭೂಪರಿವರ್ತನೆ ಶುಲ್ಕ ಜಮಾ ಆಗುತ್ತಿಲ್ಲ.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿಯೇ ಇದರಿಂದ ಸುಮಾರು 250 ಕೋಟಿ ನಷ್ಟವಾಗಿದ್ದು ರಾಜ್ಯದೆಲ್ಲೆಡೆ ಇಂತಹ ಇನ್ನೂ ಹಲವಾರು ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಷಾಮೀಲಾಗಿ ಬೇರೆ ಸ್ವತ್ತಿನ ಸರ್ವೆ ನಂಬರ್‌, ಪರಿವರ್ತನೆ ಆದೇಶ, ಅನುಮೋದನೆ ಆದೇಶಗಳನ್ನು ಬಳಸಿ ಸ್ವತ್ತುಗಳನ್ನು ಪರಭಾರೆ ಮಾಡಿದ್ದಾರೆ. ಹಸಿರು ವಲಯಗಳಲ್ಲಿ ಬಡಾವಣೆಗಳ ನಿರ್ಮಾಣ ಹಾಗೂ ಸ್ವತ್ತುಗಳ ಪರಭಾರೆಗೆ  ಸಹಾಯ ಮಾಡಿದ್ದಾರೆಎಂದು ಆರೋಪಿಸಲಾಗಿದೆ.  ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ನಡೆದಿರುವ ಹಗರಣದ ತನಿಖೆಗೆ ನಿವೃತ್ತ ಐಎಎಸ್‌ ಅಧಿಕಾರಿ ಆರ್‌.ಬಿ.ಅಗವಾನೆ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿದೆ. ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.

ವರದಿ ಬಂದ ನಂತರ, ರಾಜ್ಯದ ಇತರ ಭಾಗಗಳಲ್ಲಿಯೂ ನಡೆದಿರಬಹುದಾದ ಇಂತಹ ಪ್ರಕರಣಗಳ ತನಿಖೆ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ತೀರ್ಮಾನಿಸಲಿದೆ.

ಏನಿದು ಹಗರಣ?: ರಾಜ್ಯ ಸರ್ಕಾರ 2 ವರ್ಷಗಳ ಹಿಂದೆ ಕಂದಾಯ ನಿವೇಶನಗಳ ನೋಂದಣಿಯನ್ನು ರದ್ದು ಮಾಡಿದೆ. ಆದರೆ  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಕ್ರಮವಾಗಿ ನಮೂನೆ–9 ಮತ್ತು ನಮೂನೆ–11ಬಿ ವಿತರಣೆ ಮಾಡುವುದರ ಮೂಲಕ ಕಂದಾಯ ಭೂಮಿಯಲ್ಲಿನ ಸ್ವತ್ತುಗಳ ನೋಂದಣಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.  ನೋಂದಣಿಯಾದ ಮರುದಿನವೇ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ನಮೂನೆ–9 ಮತ್ತು ನಮೂನೆ–11ಬಿ ಪ್ರಮಾಣ ಪತ್ರವನ್ನು ರದ್ದು ಮಾಡುತ್ತಿದ್ದಾರೆ.

ಇಷ್ಟರೊಳಗೆ ಸ್ವತ್ತುಗಳು ನೋಂದಣಿಯಾಗುತ್ತಿವೆ. ಕಂದಾಯ, ಕೃಷಿ ಮತ್ತು ಹಸಿರು ವಲಯಗಳಲ್ಲಿರುವ ಭೂಮಿಯನ್ನು ಬಳಸಿಕೊಂಡು ಅಕ್ರಮವಾಗಿ ಬಡಾವಣೆ ನಿರ್ಮಿಸಲೂ ಇದರಿಂದ ಅನುಕೂಲವಾಗುತ್ತಿದೆ. ಹೀಗಾಗಿ ಸರ್ಕಾರಕ್ಕೆ ಬರಬೇಕಾದ ಆದಾಯ ಕಡಿಮೆಯಾಗುತ್ತಿದೆ ಎಂಬ ಆರೋಪ ಇದೆ.

ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ವಿವಿಧ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಈ ರೀತಿ 6510 ಸ್ವತ್ತುಗಳಿಗೆ ನಮೂನೆ–9 ಮತ್ತು ನಮೂನೆ–11ಬಿ ವಿತರಿಸಿ ನಂತರ ಅವುಗಳನ್ನು ರದ್ದು ಮಾಡಿದ್ದಾರೆ. ಈ ಮೂಲಕ ಸಾವಿರಾರು ಎಕರೆಯಷ್ಟು ಭೂಮಿ ನೋಂದಣಿಯಾಗಿದೆ ಎನ್ನಲಾಗಿದೆ. ಖಾಸಗಿ ಬಿಲ್ಡರ್‌ಗಳೂ ಈ ತಂತ್ರದ ಮೂಲಕ ಬಡಾವಣೆಗಳನ್ನೂ ನಿರ್ಮಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಅರಕೆರೆ, ಬಾಗಲೂರು, ಮಾರೇನಹಳ್ಳಿ, ಹೆಸರಘಟ್ಟ, ಹುರುಳಿಚಿಕ್ಕನಹಳ್ಳಿ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ.

ಗ್ರಾಮ ಪಂಚಾಯಿತಿ ವಿತರಣೆ ಮಾಡಿದ ನಮೂನೆ–9 ಮತ್ತು 11ಬಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪಂಚತಂತ್ರ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಈ ಹಗರಣ ಬಯಲಿಗೆ ಬಂದಿದೆ.

ಅರಕೆರೆ ಗ್ರಾಮ ಪಂಚಾಯಿತಿಯ ಕಡತನಮಲೆ ಗ್ರಾಮದಲ್ಲಿ ಒಟ್ಟು 1369 ಸ್ವತ್ತುಗಳನ್ನು ಈ ರೀತಿ ನೋಂದಣಿ ಮಾಡಲಾಗಿದೆ. ಇವುಗಳಿಗೆ ನೀಡಲಾದ ನಮೂನೆ–9ರಲ್ಲಿ ನಿವೇಶನಗಳ ಸರ್ವೆ ನಂಬರ್‌ ಇಲ್ಲ. ಸ್ವತ್ತಿನ ಭಾವಚಿತ್ರ ಇಲ್ಲ. ಭೂಸ್ವಾಧೀನಕ್ಕೆ ಪೂರಕವಾದ ದಾಖಲೆಗಳಿಲ್ಲ. ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅನುಮೋದಿತ ಬಡಾವಣೆ ಆದೇಶ, ಅನುಮೋದಿತ ಬಡಾವಣೆಯ ನಕ್ಷೆ ಇಲ್ಲದಿರುವುದೂ ಪತ್ತೆಯಾಗಿದೆ.

ಏನಿದು ನಮೂನೆ–9, 11–ಬಿ?
ನಿರ್ದಿಷ್ಟ ಸ್ವತ್ತಿಗೆ ಗ್ರಾಮ ಪಂಚಾಯಿತಿ ಪಡೆಯುತ್ತಿರುವ ತೆರಿಗೆಯ ವಿವರಗಳುಳ್ಳ ಪ್ರಮಾಣ ಪತ್ರ. ಇದರಲ್ಲಿ  ಮಾಲಿಕನ ಹೆಸರು, ಸರ್ವೆ ನಂಬರ್, ತೆರಿಗೆ ವಿವರಗಳಿರುತ್ತವೆ. ಇವುಗಳನ್ನು ನೀಡಿ ಸ್ವತ್ತುಗಳನ್ನು ನೋಂದಣಿ ಮಾಡಿಸಲಾಗುತ್ತಿದೆ.

ಸಮಿತಿಯಲ್ಲಿ…
*
ಆರ್‌.ಬಿ.ಅಗವಾನೆ
*
ಎಸ್‌.ಕೆ.ಎಚ್‌.ರೆಡ್ಡಿ
*
ರಾಮಚಂದ್ರ ಜೋಶಿ
*
ಬಸವರಾಜ ಮಾಲಗತ್ತಿ
*
ಕೆ.ಜಿ.ಜಗದೀಶ್